ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್

ಸರ್ಕಾರಿ ಸೇವಾ ಕೇಂದ್ರ

ಮದುವೆ ನೋಂದಣಿ ಈಗ ಇನ್ನಷ್ಟು ಡಿಜಿಟಲ್: ಕಾವೇರಿ 2.0 ಮೂಲಕ ಮನೆಯಲ್ಲೇ ಪ್ರಮಾಣ ಪತ್ರ! / Marriage registration is now more digital: Certificate at home through Cauvery 2.0!

Kaveri 2.0 ಮದುವೆ ನೋಂದಣಿ | ಸಂಪೂರ್ಣ ಮಾರ್ಗದರ್ಶಿ 2026

ಮದುವೆ ನೋಂದಣಿ ಈಗ ಇನ್ನಷ್ಟು ಡಿಜಿಟಲ್: ಕಾವೇರಿ 2.0 ಮೂಲಕ ಮನೆಯಲ್ಲೇ ಪ್ರಮಾಣ ಪತ್ರ!

ಮದುವೆ ಪ್ರಮಾಣ ಪತ್ರ ಈಗ ಮೊಬೈಲ್‌ನಲ್ಲಿ — ಹೇಗೆ ಪಡೆಯಬಹುದು?
Marriage registration is now more digital: Certificate at home through Cauvery 2.0

Marriage registration is now more digital: Certificate at home through Cauvery 2.0

The Karnataka government has made the marriage registration process largely online through Kaveri 2.0, bringing great convenience to couples.

By Prashanth Vishwanath · 28-02-2026 · SangeethaOnline.in

2025-26ರಲ್ಲಿ ಕರ್ನಾಟಕ ಸರ್ಕಾರ ಕಾವೇರಿ 2.0 (Kaveri Online Services) ಮೂಲಕ ಮದುವೆ ನೋಂದಣಿ ಪ್ರಕ್ರಿಯೆಯನ್ನು ಹೆಚ್ಚಿನ ಮಟ್ಟಿಗೆ ಆನ್‌ಲೈನ್ ಮಾಡಿರುವುದು ದಂಪತಿಗಳಿಗೆ ದೊಡ್ಡ ಅನುಕೂಲ ತಂದಿದೆ. ಈಗ ಮದುವೆ ಪ್ರಮಾಣ ಪತ್ರಕ್ಕಾಗಿ ಸಬ್‌ರಿಜಿಸ್ಟ್ರಾರ್ ಕಚೇರಿಗಳ ಸುತ್ತು ಹೊಡೆಯುವ ಅವಶ್ಯಕತೆ ಕಡಿಮೆಯಾಗಿದ್ದು, ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಲಭ್ಯವಾಗಿದೆ.

ಮದುವೆ ಪ್ರಮಾಣ ಪತ್ರ ಯಾಕೆ ಅತಿ ಮುಖ್ಯ?

ಮದುವೆ ಪ್ರಮಾಣ ಪತ್ರವು ಕೇವಲ ಒಂದು ಕಾಗದವಲ್ಲ, ಕಾನೂನುಬದ್ಧವಾಗಿ ಪತಿ-ಪತ್ನಿ ಸಂಬಂಧವನ್ನು ಸಾಬೀತುಪಡಿಸುವ ಅಧಿಕೃತ ದಾಖಲೆ. ಬ್ಯಾಂಕ್‌ ಖಾತೆ, ಇನ್ಶೂರೆನ್ಸ್ ಕ್ಲೈಮ್, ಆಸ್ತಿ ಹಕ್ಕು, ವಾರಸುದಾರಿಕೆ, ಮಕ್ಕಳ ಜನನ ಪ್ರಮಾಣ ಪತ್ರದಲ್ಲಿ ತಾಯಿ-ತಂದೆಯ ಹೆಸರು ದಾಖಲಿಸುವ ಎಲ್ಲ ಪ್ರಮುಖ ಕಾರ್ಯಗಳಿಗೆ ಈ ಪ್ರಮಾಣ ಪತ್ರ ಅತ್ಯಗತ್ಯವಾಗುತ್ತದೆ.

ಮದುವೆ ನೋಂದಣಿ ಯಾವ ಯಾವ ಕಾಯ್ದೆಗಳ ಅಡಿಯಲ್ಲಿ?

🔸 ಹಿಂದೂ ವಿವಾಹ ಕಾಯ್ದೆ 1955

ವರ-ವಧು ಇಬ್ಬರೂ ಹಿಂದೂ, ಬೌದ್ಧ, ಜೈನ ಅಥವಾ ಸಿಖ್ ಧರ್ಮಕ್ಕೆ ಸೇರಿದವರಾಗಿರಬೇಕು. ಸಾಂಪ್ರದಾಯಿಕ ರೀತಿಯಲ್ಲಿ ವಿವಾಹ ನಡೆದಿರಬೇಕು. ಮದುವೆಯ ದಿನಾಂಕ, ಸ್ಥಳ, ಸಾಕ್ಷಿಗಳ ವಿವರಗಳನ್ನು ಅರ್ಜಿಯಲ್ಲಿ ದಾಖಲಿಸಬೇಕು.

🔸 ವಿಶೇಷ ವಿವಾಹ ಕಾಯ್ದೆ 1954

ಪತಿ-ಪತ್ನಿ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರೆ. ಅಂತರ್ಧರ್ಮ ಅಥವಾ ವಿಶೇಷ ರೀತಿಯ ನೋಂದಣಿ ಮದುವೆಯಾಗಿದ್ದರೆ. ಕೆಲ ಸಂದರ್ಭಗಳಲ್ಲಿ ವಿವಾಹಕ್ಕೂ ಮೊದಲು ನೋಟಿಸ್ ಅವಧಿ ಇರುತ್ತದೆ.

ಮದುವೆ ನೋಂದಣಿಗೆ ಬೇಕಾಗುವ ಮುಖ್ಯ ದಾಖಲೆಗಳು ಯಾವುವು?

  • ವರ ಮತ್ತು ವಧುವಿನ ಆಧಾರ್ ಕಾರ್ಡ್.
  • ಮತದಾರರ ಗುರುತಿನ ಚೀಟಿ (Voter ID).
  • ಎಸ್‌.ಎಸ್‌.ಎಲ್‌.ಸಿ ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರ — ವಯಸ್ಸಿನ ಸಾಕ್ಷ್ಯಕ್ಕಾಗಿ (ವರನಿಗೆ 21, ವಧುವಿಗೆ 18 ವರ್ಷ).
  • ರೇಷನ್ ಕಾರ್ಡ್ — ಕುಟುಂಬದ ವಿವರಕ್ಕಾಗಿ.
  • ಮದುವೆ ಆಮಂತ್ರಣ ಪತ್ರ.
  • ಮದುವೆಯ ಫೋಟೋಗಳು — ಮುಖ್ಯ ವಿಧಿಯ ಸ್ಪಷ್ಟ ಚಿತ್ರಗಳು.
  • ಇಬ್ಬರು ಸಾಕ್ಷಿಗಳು ಮತ್ತು ಅವರ ಗುರುತಿನ ಚೀಟಿಗಳು.

ಸೂಚನೆ: ಎಲ್ಲಾ ದಾಖಲೆಗಳ ಮೇಲೆ ಹೆಸರು, ಜನ್ಮದಿನ, ಫೋಟೋ ಸಮನಾಗಿರೋದು ತುಂಬಾ ಮುಖ್ಯ. ತಪ್ಪು ಇದ್ದರೆ ಮೊದಲು ತಿದ್ದುಪಡಿ ಮಾಡಿಸಿಕೊಂಡರೆ ಆನ್‌ಲೈನ್ ಪ್ರಕ್ರಿಯೆ ಸುಲಭವಾಗುತ್ತದೆ.

ಕಾವೇರಿ 2.0 ಮೂಲಕ ಆನ್‌ಲೈನ್ ಮದುವೆ ನೋಂದಣಿ — ಹಂತ ಹಂತದ ಮಾರ್ಗದರ್ಶಿ

ಹಂತವಿವರ
Step 1ಕಾವೇರಿ 2.0 ವೆಬ್‌ಸೈಟ್‌ಗೆ ಭೇಟಿ, "Online Marriage Registration Application" ಆಯ್ಕೆ.
Step 2ಹೊಸ ಯೂಸರ್ ಆಗಿ ರಿಜಿಸ್ಟರ್ (ಹೆಸರು, ಮೊಬೈಲ್, ಇಮೇಲ್, OTP).
Step 3ಲಾಗಿನ್ ಮಾಡಿ "Registration of Marriage" ಆಯ್ಕೆ.
Step 4ವರ-ವಧುವಿನ ವಿವರಗಳು, ಮದುವೆಯ ದಿನಾಂಕ, ಸಮಯ, ಸ್ಥಳ ಭರ್ತಿ.
Step 5ಉಪ-ನೊಂದಣಾಧಿಕಾರಿ ಕಚೇರಿ ಆಯ್ಕೆ, ದಾಖಲೆಗಳ ಸ್ಕ್ಯಾನ್ ಅಪ್ಲೋಡ್.
Step 6ಶುಲ್ಕ ಪಾವತಿ ಮತ್ತು ಕಚೇರಿ ಭೇಟಿ ದಿನಾಂಕ ಕಾಯ್ದಿರಿಸುವಿಕೆ.
Step 7ಕಚೇರಿಯಲ್ಲಿ ಪರಿಶೀಲನೆ, ನಂತರ SMS, ಡಿಜಿಟಲ್ ಪ್ರಮಾಣ ಪತ್ರ ಡೌನ್‌ಲೋಡ್.

ನಿಗದಿತ ದಿನಾಂಕಕ್ಕೆ ವರ-ವಧು ಮತ್ತು ಸಾಕ್ಷಿಗಳು ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು. ನಂತರ ಕಾವೇರಿ ಪೋರ್ಟಲ್‌ನಿಂದ digitally signed certificate ಡೌನ್‌ಲೋಡ್ ಮಾಡಿಕೊಳ್ಳಿ.

ಮದುವೆ ಪ್ರಮಾಣ ಪತ್ರದಿಂದ ಲಭ್ಯವಾಗುವ ಮುಖ್ಯ ಪ್ರಯೋಜನಗಳು

  • ಕಾನೂನುಬದ್ಧವಾಗಿ ಪತಿ-ಪತ್ನಿ ಎಂದು ಸರ್ಕಾರದ ದಾಖಲೆಗಳಲ್ಲಿ ಸಾಬೀತು.
  • ಬ್ಯಾಂಕ್ ಜಂಟಿ ಖಾತೆ, ಲೋನ್, ಇನ್ಶೂರೆನ್ಸ್ ಕ್ಲೈಮ್‌ಗೆ ಅಗತ್ಯ.
  • ಆಸ್ತಿ ಹಕ್ಕು, ವಾರಸುದಾರಿಕೆ ಪ್ರಕರಣಗಳಲ್ಲಿ ಪುರಾವೆ.
  • ಸರ್ಕಾರಿ ಯೋಜನೆಗಳು, ಸಹಾಯಧನ, ಸಬ್ಸಿಡಿಗೆ ಅರ್ಜಿ ಸಲ್ಲಿಸಲು ಸಹಾಯಕ.
  • ಮಕ್ಕಳ ಜನನ ಪ್ರಮಾಣ ಪತ್ರದಲ್ಲಿ ತಾಯಿ-ತಂದೆ ವಿವರ ದಾಖಲಿಸಲು ಸಹಾಯಕ.

ನಮ್ಮ ಸೇವೆಗಳು — ಮದುವೆ ನೋಂದಣಿ ಸಹ ಸೇರಿ 350ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು

ನಿಮ್ಮ ಸಮಯ ಉಳಿಸಿಕೊಳ್ಳಲು ಮತ್ತು ದೋಷರಹಿತವಾಗಿ ಆನ್‌ಲೈನ್ ಮದುವೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರಿ ಸೇವಾ ಕೇಂದ್ರ, ಬಂಗಾರಪೇಟೆ ಸದಾ ಸಹಾಯಕ್ಕೆ ಸಿದ್ಧವಾಗಿದೆ. ಮದುವೆ ಪ್ರಮಾಣ ಪತ್ರ ನೋಂದಣಿ ಜೊತೆಗೆ ಆದಾಯ ತೆರಿಗೆ (ITR), GST, ಸಾಲ/ಲೋನ್ ಅರ್ಜಿ, ದಾಖಲೆಗಳ ತಯಾರಿ ಸೇರಿ 350+ ಸೇವೆಗಳು ಲಭ್ಯ.

ಸರ್ಕಾರಿ ಸುದ್ದಿಗಳು, ಯೋಜನೆಗಳು, ವಿದ್ಯಾರ್ಥಿವೇತನ, ಉದ್ಯೋಗ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಅನುಸರಿಸಿ.

📰 Read More Articles

ಅಲ್ಪಸಂಖ್ಯಾತರ ಮಕ್ಕಳಿಗೆ ಉಚಿತ ವಸತಿ-ಶಿಕ್ಷಣ: 2026-27ನೇ ಸಾಲಿನ ಮೋರಾರ್ಜಿ ದೇಸಾಯಿ ನಿವಾಸಿ ಶಾಲೆಗಳ ಅರ್ಜಿ ಪ್ರಕ್ರಿಯೆ ಆರಂಭ / Free boarding and lodging for minority children: Application process for Morarji Desai Residential Schools for the year 2026-27 begins

ಲೇಖಕರು ಮತ್ತು ಪ್ರಕಾಶಕರು

ಸಂಪಾದಕರು/ಲೇಖಕರು: ಪ್ರಶಾಂತ್ ವಿಶ್ವನಾಥ್ & ಸಂಗೀತ ಪ್ರಶಾಂತ್
ಸರ್ಕಾರಿ ಸೇವಾ ಕೇಂದ್ರ, ಬಂಗಾರಪೇಟೆ
ಮೊಬೈಲ್: 8880888012
ಇ-ಮೇಲ್: spkseva@gmail.com
ವೆಬ್‌ಸೈಟ್: www.sangeethaonline.in
ಪ್ರಕಾಶಕರು: SANGEETHA ONLINE PUBLICATIONS, ಬಂಗಾರಪೇಟೆ

No comments:

Post a Comment