(ನಿಮ್ಮ ಸೇವೆಯ ನಮಗೆ ಆಧ್ಯತೆ) ನಾವು ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ -ಜಾಹಿರಾತು ಕ್ಲಿಕ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳೋಂದಿಗೆ ನಿಮ್ಮ, "ಪ್ರಶಾಂತ್ ವಿಶ್ವಾನಾಥ್".
ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಾರಂಭವಾಗಿದೆ! Adarsha Vidyalaya Online Application 2025-26
![]() |
Adarsha Vidyalaya Admission 2025-26
ಆದರ್ಶ ವಿದ್ಯಾಲಯ ಅಪ್ಲಿಕೇಶನ್: 2025-26ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಸಂಪೂರ್ಣ ಮಾಹಿತಿಯು ಈ ಕೆಳಗಿನಂತಿದೆ.
Important Dates Of Adarsha Vidyalaya Adarsha Vidyalaya Online Form 2025
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ(Start Date) | 14 ಫೆಬ್ರವರಿ 2025 |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ(Last Date) | ಫೆಬ್ರವರಿ 28, 2025 |
ಪ್ರವೇಶ ಪರೀಕ್ಷೆ ದಿನಾಂಕ(Exam Date) | ಮಾರ್ಚ್ 23, 2025 |
ಅಭ್ಯರ್ಥಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು(Eligibility):
- 2024-25ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಐದನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲ್ಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಆಯಾ ತಾಲ್ಲೂಕಿನ ಖಾಯಂ ನಿವಾಸಿಗಳ ಮಕ್ಕಳು ಬೇರೆ ತಾಲ್ಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಛಿಸಿದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು(Documents Required):
- SATS ID (Student Achievement Tracking System)
- ಇತ್ತೀಚಿನ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್/ರೇಷನ್ ಕಾರ್ಡ್/ಸ್ಥಳೀಯ ಪ್ರಮಾಣ ಪತ್ರ
- ವಿಶೇಷ ಪ್ರವರ್ಗಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರ (ವಿಶೇಷ ಅಗತ್ಯವಿರುವ ಅಭ್ಯರ್ಥಿಗಳಿಗೆ ಮಾತ್ರ)
- ಅಧ್ಯಯನ ಪ್ರಮಾಣ ಪತ್ರ (ಹೊರ ರಾಜ್ಯ ಅಭ್ಯರ್ಥಿಗಳಿಗೆ ಮಾತ್ರ)
ಪಠ್ಯಕ್ರಮ-Adarsha Vidyalaya Exam Syllabus 2025-26
ಆಯ್ಕೆ ಪರೀಕ್ಷೆಗೆ 5ನೇ ತರಗತಿಯ ಪಠ್ಯ ಪುಸ್ತಕ/ ಕಲಿಕಾ ಚೇತರಿಕೆ ಕಲಿಕಾಂಶಗಳನ್ನು ಆಧರಿಸಿ ಕೆಳಗಿನಂತೆ ಪರಿಗಣಿಸಲಾಗುವುದು.
ಕನ್ನಡ | 16% |
ಇಂಗ್ಲೀಷ್ | 16% |
ಗಣಿತ | 16% |
ಪರಿಸರ ಅಧ್ಯಯನ | 16% |
ಸಮಾಜ ವಿಜ್ಞಾನ | 16% |
ಸಾಮಾನ್ಯ ಜ್ಞಾನ (GK) | 10% |
ಸಾಮಾನ್ಯ ಬೌದ್ಧಿಕ ಸಾಮರ್ಥ್ಯ | 10% |