ನಿಮ್ಮ ಸೇವೆಯೆ ನಮಗೆ ಆಧ್ಯತೆ

ನಿಮ್ಮ ಸೇವೆಯೆ ನಮಗೆ ಆಧ್ಯತೆ
ಅರ್ಜಿಯನ್ನ ಹೇಗ ಸಲ್ಲಿಸುವುದು ಮತ್ತು ಹೇಗೆ ಅದರ ಸ್ಥಿತಿ ಹೇಗೆ ತಿಳಿಯುವುದು ಕ್ಲಿಕ್‌ ಮಾಡಿ ತಿಳಿಯಿರಿ.

ಉದ್ಯಮ ಶೀಲತಾ ತರಬೇತಿಗಾಗಿ ಆನ್‌ಲೈನ್ ಅರ್ಜಿ Online Application for Entrepreneurship Training

(ನಿಮ್ಮ ಸೇವೆಯ ನಮಗೆ ಆಧ್ಯತೆ) ನಾವು ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ -ಜಾಹಿರಾತು ಕ್ಲಿಕ್‌ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳೋಂದಿಗೆ ನಿಮ್ಮ‌, "ಪ್ರಶಾಂತ್‌ ವಿಶ್ವಾನಾಥ್".
GOOGLE NEWS-SPKSEVA KENDRA

ಪರಿಶಿಷ್ಟ ಜಾತಿಯ 50 ಮಹಿಳಾ ಪದವಿಧರರಿಗೆ ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಪ್ರತಿಷ್ಠತ ಐಐಎಂಬಿ ಬೆಂಗಳೂರಿನಲ್ಲಿ ಉದ್ಯಮ ಶೀಲತಾ ತರಬೇತಿಗಾಗಿ ಆನ್‌ಲೈನ್ ಅರ್ಜಿ.

ಉದ್ಯಮ ಶೀಲತಾ ತರಬೇತಿಗಾಗಿ ಆನ್‌ಲೈನ್ ಅರ್ಜಿ


ಆನ್‍ಲೈನ್ ಅರ್ಜಿಗಳನ್ನು ದಿನಾಂಕ:17-01-2024 ರಿಂದ 31-01-2024 ಸಂಜೆ 5.00 ಗಂಟೆಯವರೆಗೆ ಆಹ್ವಾನಿಸಲಾಗಿದೆ


• 2023-24ನೇ ಸಾಲಿನಲ್ಲಿ 50 ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯು 5 -6 ತಿಂಗಳು

• ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

• ಉದ್ದಿಮೆ ಸ್ಥಾಪಿಸಲು ಉದ್ದೇಶ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು

• ವಯೋಮಿತಿ: ಕನಿಷ್ಟ 21 ವರ್ಷಗಳು ಗರಿಷ್ಟ 45 ವರ್ಷಗಳು

• ವಿದ್ಯಾರ್ಹತೆ: ಪದವೀಧರರಾಗಿರಬೇಕು.

• ತರಬೇತಿಯನ್ನು ಆಂಗ್ಲ ಭಾಷೆಯಲ್ಲಿ ನೀಡಲಾಗುತ್ತದೆ

• 8 ದಿನದ ತರಬೇತಿಯು ಐ.ಐಎಂ-ಬೆಂಗಳೂರು ಕ್ಯಾಂಪಸ್ನತಲ್ಲಿ ನೀಡಲಾಗುವುದು, ಈ ದಿನಗಳಂದು ಊಟ ಮತ್ತು ವಸತಿ ಸೌಲಭ್ಯವನ್ನು ಐ.ಐಎಂ-ಬೆಂಗಳೂರುರವರ ವತಿಯಿಂದ ಒದಗಿಸಲಾಗುತ್ತದೆ

• ತರಬೇತಿಯಲ್ಲಿ ಶೇ.100 ರಷ್ಟು ಹಾಜರಾತಿ ಹಾಗೂ ಯಶಸ್ವಿಯಾಗಿ ತರಬೇತಿ ಪೂರೈಸಿ ತರಬೇತಿ ಪ್ರಮಾಣ ಪತ್ರವನ್ನು ಪಡೆದ ಅಭ್ಯರ್ಥಿಗಳಿಗೆ ಮಾತ್ರ ರೂ.10,000/-ಗಳ ಶಿಷ್ಯವೇತನವನ್ನು ತರಬೇತಿ ಮುಕ್ತಾಯಗೊಂಡ ನಂತರ ನೀಡಲಾಗುವುದು .

ಆಯ್ಕೆಯ ವಿಧಾನ:

•ಐ.ಐಎಂ-ಬೆಂಗಳೂರು ಸಂಸ್ಥೆಯ ವತಿಯಿಂದ ಎಲ್ಲಾ ಅರ್ಜಿದಾರರಿಗೆ ಅರ್ಹತಾ ಪರೀಕ್ಷೆಯನ್ನು ಐ.ಐ.ಎಂ-ಬೆಂಗಳೂರು ಕ್ಯಾಂಪಸ್‌ನಲ್ಲಿ ದಿನಾಂಕ:11-02-2024 ರಂದು ನಡೆಸಲಾಗುವುದು.

• ಅರ್ಹತಾ ಪರೀಕ್ಷೆಯ merit list ಆಧಾರದ ಮೇಲೆ 50 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು..

• ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ merit ಆಧಾರದ ಮೇಲೆ 1:5 ಅಭ್ಯರ್ಥಿಗಳಿಗೆ ಐ.ಐ.ಎಂ-ಬೆಂಗಳೂರು ರವರಿಂದ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುವುದು.

ಬೇಕಾದ ದಾಖಲೆಗಳು 

  • ಆಧಾರ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ 
  • ಪದವಿ ಪ್ರಮಾಣ ಪತ್ರ ಮಾರ್ಕ್ಸ್ ಕಾರ್ಡ್  
  • ಜಾತಿ ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಮುಖ್ಯವಾಗಿ ಪ್ರಾಜೆಕ್ಟ್ ರಿಪೋರ್ಟ್
  • ಫೋಟೋ
ಅರ್ಜಿ ಸಲ್ಲಸಲು ಖುದ್ದಾಗಿ ನಮ್ಮನ್ನ ಸಂಪರ್ಕಿಸಬಹುದು.