ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್

ಸರ್ಕಾರಿ ಸೇವಾ ಕೇಂದ್ರ

ಸಂಜೀವಿನಿ ವಿದ್ಯೆ ಕಲಿತ ಕಚ ಮತ್ತು ದೇವಯಾನಿಯ ಶಾಪ / Katcha and Devyani

(ನಿಮ್ಮ ಸೇವೆಯ ನಮಗೆ ಆಧ್ಯತೆ) ನಾವು ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ -ಜಾಹಿರಾತು ಕ್ಲಿಕ್‌ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳೋಂದಿಗೆ ನಿಮ್ಮ‌, "ಪ್ರಶಾಂತ್‌ ವಿಶ್ವಾನಾಥ್".
GOOGLE NEWS-SPKSEVA KENDRA

ಸಂಜೀವಿನಿ ವಿದ್ಯೆ ಕಲಿತ ಕಚ ಮತ್ತು ದೇವಯಾನಿಯ ಶಾಪ / Katcha and Devyani

ಸಂಜೀವಿನಿ ವಿದ್ಯೆ ಕಲಿತ ಕಚ ಮತ್ತು ದೇವಯಾನಿಯ ಶಾಪ / Katcha and Devyani
ಚಿತ್ರ - wikipedia
ಕಚ -  ದೇವಗುರುವಾದ ಬೃಹಸ್ಪತಿಯ ಮಗ. ದೇವತೆಗಳ ಪ್ರಾರ್ಥನೆಯಂತೆ ಅಸುರಗುರುವಾದ ಶುಕ್ರಾಚಾರ್ಯನ ಶಿಷ್ಯನಾಗಿ ಮೃತಸಂಜೀವಿನೀ ವಿದ್ಯೆಯನ್ನು ಪಡೆಯುವ ಪ್ರಯತ್ನ ಮಾಡಿದ. ಅಲ್ಲಿ ಗುರುಪುತ್ರಿ ದೇವಯಾನಿ ಕಚನನ್ನು ಕಂಡು ಮೋಹಿತಳಾದಳು. ಇದನ್ನರಿತ ದಾನವರು ಎರಡು ಬಾರಿ ಕಚನನ್ನು ಕೊಲೆಮಾಡಿದರು. ಆದರೆ ಮಗಳಾದ ದೇವಯಾನಿಯ ಅಪೇಕ್ಷೆಯಂತೆ ಸಂಜೀವಿನೀ ಮಂತ್ರಬಲದಿಂದ ಶುಕ್ರಾಚಾರ್ಯ ಎರಡು ಬಾರಿಯೂ ಕಚನನ್ನು ಬದುಕಿಸಿದ. ಮತ್ತೆ ಮತ್ತೆ ಬದುಕಿಬಂದ ಕಚನನ್ನು ಮೂರನೆಯ ಬಾರಿ ಕೊಂದು ಅವನ ಮಾಂಸವನ್ನು ಮದ್ಯದೊಡನೆ ಕಲಸಿ ತಮ್ಮ ಗುರುವಾದ ಶುಕ್ರಾಚಾರ್ಯನಿಗೆ ಅವರು ಉಣಬಡಿಸಿದರು. ಶುಕ್ರನಾದರೋ ತನ್ನ ಮಗಳಾದ ದೇವಯಾನಿಯ ಬೇಡಿಕೆಯಂತೆ ತನ್ನ ಉದರದಲ್ಲಿ ಪ್ರವೇಶಿಸಿದ್ದ ಕಚನಿಗೆ ಸಂಜೀವಿನಿ ವಿದ್ಯೆಯನ್ನು ಪುರ್ಣವಾಗಿ ಉಪದೇಶಿಸಿ ಅವನನ್ನು ಬದುಕಿಸಿದ. ಬದುಕಿಬಂದ ಕಚ ಗುರುಪುತ್ರಿಯೆಂಬ ಕಾರಣದಿಂದ ದೇವಯಾನಿಯನ್ನು ಮದುವೆಯಾಗಲು ಒಪ್ಪಲಿಲ್ಲ. ಕುಪಿತಳಾದ ದೇವಯಾನಿ ಕಚ ಕಲಿತ ದಿವ್ಯಮಂತ್ರ ಫಲಿಸದಿರಲೆಂದು ಶಪಿಸಿದಳು. ಈ ವಿಚಾರ ಮಹಾಭಾರತದ ತೋಯಸಂಭವ ಪರ್ವದಲ್ಲಿದೆ.ಅಂತೆಯೇ ಅಗ್ನಿ ಪುರಾಣ ಮತ್ತು ಮತ್ಸ್ಯ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಕೆಳಗೆ ಪೂರ್ತಿ ಓದಬಹುದು

ದೇವ ಗುರು ಬೃಹಸ್ಪತಿಯ ಮಗ ಕಚ, ರಾಕ್ಷಸರ ಗುರು ಶುಕ್ರಾಚಾರ್ಯರಿಂದ ಮೃತ ಸಂಜೀವಿನಿ ವಿದ್ಯೆ ಕಲಿತಿದ್ದು ಮತ್ತು ಶುಕ್ರರ ಮಗಳು ದೇವಯಾನಿ ಅವನಿಗೆ ಮನಸೋತು ಹೋದಳು.

1
ಸಂಜೀವಿನಿ ವಿದ್ಯೆ ಕಲಿತ ಕಚ ಮತ್ತು ದೇವಯಾನಿಯ ಶಾಪ / Katcha and Devyani

No comments:

Post a Comment