ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್

ಸರ್ಕಾರಿ ಸೇವಾ ಕೇಂದ್ರ

Free solar power for 3.5 lakh farmers under Kusum Yojana ಕುಸುಮ್ ಯೋಜನೆ ಅಡಿ 3.5 ಲಕ್ಷ ರೈತರಿಗೆ ಉಚಿತ ಸೌರ ವಿದ್ಯುತ್

 Government subsidy announcement for installing solar pump set for farmers:
ರೈತರಿಗೆ ಸೌರ ಪಂಪ್‌ಸೆಟ್‌ ಅಳವಡಿಸಲು ಸರ್ಕಾರದಿಂದ ಸಹಾಯಧನ ಘೋಷಣೆ: ಪಂಪ್‌ಸೆಟ್‌ ಬೆಲೆ, ಅರ್ಜಿ ಪ್ರತಿಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು

Free solar power for 3.5 lakh farmers under Kusum Yojana ಕುಸುಮ್ ಯೋಜನೆ ಅಡಿ 3.5 ಲಕ್ಷ ರೈತರಿಗೆ ಉಚಿತ ಸೌರ ವಿದ್ಯುತ್
Pm kusum
ಪಿಎಂ ಕುಸುಮ್ – ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾಭಿಯಾನ್ (PM-KUSUM: Pradhan Mantri Kisan Urja Suraksha evam Uttan Mahaabhiyan) ಕಂಪೋನೆಂಟ್-ಬಿ ಅಡಿಯಲ್ಲಿ ಜಾಲಮುಕ್ತ ಸೌರ ಚಾಲಿತ ಪಂಪ್‌ಸೆಟ್‌ ಗಳನ್ನು ಅಳವಡಿಸುವ ಯೋಜನೆಯನ್ನು ಕೆ.ಆರ್.ಇ.ಡಿ.ಎಲ್. (KREDL) ಮೂಲಕ ರಾಜ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿದ್ಯುತ್ ಸರಬರಾಜು ಸಂಸ್ಥೆಗಳ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ಸೌರ ಪಂಪ್‌ಸೆಟ್‌ ಗೆ ಶೇ. 30 ರಷ್ಟು (30%) ಕೇಂದ್ರದಿಂದ ಸಹಾಯ ಧನದೊಂದಿಗೆ ಗರಿಷ್ಠ 7.5 ಹೆಚ್.ಪಿ. (7.5 HP)

ಸಾಮರ್ಥ್ಯವಿರುವ ಪಂಪ್‌ಸೆಟ್‌ ಗಳನ್ನು ಪಡೆದುಕೊಳ್ಳಬಹದಾಗಿದೆ.    pm kusum scheme

Free solar power for 3.5 lakh farmers under Kusum Yojana ಕುಸುಮ್ ಯೋಜನೆ ಅಡಿ 3.5 ಲಕ್ಷ ರೈತರಿಗೆ ಉಚಿತ ಸೌರ ವಿದ್ಯುತ್
ರೈತರು Farmer 10 ಹೆಚ್.ಪಿ. (10 HP) ಸಾಮ್ಯರ್ಥವಿರುವ ಪಂಪ್‌ಸೆಟ್‌ ಗಳನ್ನು ಕೂಡ ಅಳವಡಿಸಬಹುದು ಆದರೆ, ಪ್ರತಿ ಪಂಪ್‌ಸೆಟ್‌ ಗೆ ಕೇಂದ್ರದ ಸಹಾಯಧನ 7.5 ಹೆಚ್.ಪಿ. ಸಾಮ್ಯರ್ಥದ ಪಂಪ್‌ಸೆಟ್‌ ದರದ ಶೇ. 30 (30%) ಕ್ಕೆ ಸೀಮಿತಗೊಳಿಸಲಾಗಿದೆ. ಕೇಂದ್ರಸರ್ಕಾರದ ಶೇ. 30 ಸಹಾಯಧನದ ಹೊರತುಪಡಿಸಿ, ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದ ರೈತ ಫಲಾನುಭವಿಗಳಿಗೆ, ಕೊಳವೆ ಅಥವಾ ತೆರೆದ ಬಾವಿಗಳಿಗೆ ಸೌರ ಪಂಪ್‌ಸೆಟ್‌ ಒದಗಿಸಲು ಶೇ. 30 ಸಹಾಯಧನದ ಒದಗಿಸಲಾಗುತ್ತಿದೆ. ಇದಲ್ಲದೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ. 50 (50%) ಸಹಾಯಧನದ ಒದಗಿಸಲಾಗುತ್ತಿದೆ. ಉಳಿದ ಮೊತ್ತವನ್ನು ರೈತರು ಪಾವತಿಸಬೇಕಾಗುತ್ತದೆ (ಸಾಮಾನ್ಯ ವರ್ಗ ಶೇ.40, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ: ಶೇ.20).

ಅರ್ಹ ರೈತ ಫಲಾನುಭವಿಗಳು ಯಾವುದೇ ಕಚೇರಿಗಳಿಗೆ ಭೇಟಿ ನೀಡದೇ, ಮನೆಯಲ್ಲೇ ಕುಳಿತು ಆನ್ಲೈನ್ (Online) ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಅರ್ಜಿ ಪ್ರತಿಕ್ರಿಯೆಯು ಸುಲಭವಾಗಿದ್ದು, ಈ ಕೆಳಗೆ ನಮೂದಿಸಿರುವ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ..

    pm kusum yojana karnataka

  1.     ರೈತರು ಜಮೀನಿನಲ್ಲಿ ಬಾವಿಯನ್ನು ಕೊರೆಸಿರಬೇಕು.
  2.     ಈ ಯೋಜನೆಯು ಹೊಸ ಕೃಷಿ ಪಂಪ್‌ಸೆಟ್‌ ಗಳಿಗೆ ಮಾತ್ರ ಅನ್ವಯಿಸುತ್ತದೆ.
  3.     ಹಾಲಿ ವಿದ್ಯುತ್ ಸಂಪರ್ಕ ಹೊಂದಿರುವ ಪಂಪ್‌ಸೆಟ್‌ ಗಳು ಅರ್ಹವಿರುವುದಿಲ್ಲ.
  4.     ಎಂ.ಎನ್.ಆರ್.ಇ ಮಾನದಂಡಗಳ ಪ್ರಕಾರ ಪಂಪ್‌ಸೆಟ್‌ ನೀರೆತ್ತುವ ಆಳ (Total head in meters): 3 ಹೆಚ್.ಪಿ. – 20 ಮೀಟರ್, 5 ಹೆಚ್.ಪಿ. – 70 ಮೀಟರ್, 7.5 ಹೆಚ್.ಪಿ. – 100 ಮೀಟರ್, 10 ಹೆಚ್.ಪಿ. – 100 ಮೀಟರ್
  5.     ಈಗಾಗಲೇ ಗಂಗಾಕಲ್ಯಾಣ ಯೋಜನೆಯ ಅಡಿಯಲ್ಲಿ ಲಾಭವನ್ನು ಪಡೆದಿರುವ ಹಾಗೂ ಪಡೆಯಲು ಪ್ರಕ್ರಿಯೆಯಲ್ಲಿರುವ ರೈತರು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಿರುವುದಿಲ್ಲ.
  6.     ಪಿಎಂ-ಕುಸುಮ್, ಕಂಪೋನೆಂಟ್-ಬಿ ಮಾರ್ಗಸೂಚಿಯ ಅನ್ವಯ ‘ಡಾರ್ಕ್ ಝೋನ್’ ಎಂದು ಘೋಷಿಸರುವ ಪ್ರದೇಶಗಳಲ್ಲಿ ಈ ಯೋಜನೆಯು ಅನ್ವಯಿಸುವುದಿಲ್ಲ.
  7.     ಅರ್ಜಿದಾರರು ಕೇವಲ ಒಂದು ಸೌರ ಪಂಪ್‌ಸೆಟ್‌ ಗೆ ಅರ್ಜಿ ಸಲ್ಲಿಸಬಹುದು.
  8.     ಈಗಾಗಲೇ ಇತರೆ ಅನುದಾನಿತ ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಸೌರ ಪಂಪ್‌ಸೆಟ್‌ ಪಡೆದಿದ್ದರೆ ಅಂತಹ ಅರ್ಜಿದಾರರು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಿರುವುದಿಲ್ಲ.
  9.     ಅರ್ಜಿದಾರರು ಹಣವನ್ನು ಡಿ.ಡಿ. ಮೂಲಕವೇ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ, ಚೆಕ್ ಪುಸ್ತಕ ಅಥವಾ ಆನ್ಲೈನ್ ಪೇಮೆಂಟ್ ಮೂಲಕ ಹಣ ಪಾವತಿಸಲು ಯಾವುದೇ ಅವಕಾಶವಿರುವುದಿಲ್ಲ.

 “ಮೊದಲು ಬಂದವರಿಗೆ ಮೊದಲು ಆಧ್ಯತೆ” ಮೇರೆಗೆ ರೈತರಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಲಾಗುತ್ತದೆ.

    ಎಲ್ಲ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇ.5 ರಷ್ಟು ಮೀಸಲಾತಿ ಒದಗಿಸಲಾಗುತ್ತದೆ.

pm kusum karnataka

 ಸೌರ ಪಂಪ್‌ಸೆಟ್‌ ದರಗಳು ಮತ್ತು ಪಾವತಿಸಬೇಕಾದ ಮೊತ್ತ

Free solar power for 3.5 lakh farmers under Kusum Yojana ಕುಸುಮ್ ಯೋಜನೆ ಅಡಿ 3.5 ಲಕ್ಷ ರೈತರಿಗೆ ಉಚಿತ ಸೌರ ವಿದ್ಯುತ್

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: pm kusum yojana online registration

  •     ಭೂ ಮಾಲೀಕತ್ವ ಇರುವ ಅರ್ಜಿದಾರರ ಹೆಸರು.
  •     ವಾಸ ಸ್ಥಳ ಮತ್ತು ವಿಳಾಸ, ಗ್ರಾಮ, ತಾಲ್ಲೂಕು, ಜಿಲ್ಲೆ.
  •     ಆಧಾರ್ ಸಂಖ್ಯೆ (Aadhaar ನಂಬರ್).
  •     ದೂರವಾಣಿ ಸಂಖ್ಯೆ.
  •     ಭೂ ದಾಖಲೆಗಳ ವಿವರಗಳು: ಆರ್.ಟಿ.ಸಿ, ಸರ್ವೇ ನಂಬರ್, ಗ್ರಾಮ, ತಾಲ್ಲೂಕು, ಹೊಬಳಿ, ಗ್ರಾಮ ಪಂಚಾಯತಿ, ಜಿಲ್ಲೆ.
  •     ಡಿ.ಡಿ. ಸಂಖ್ಯೆ. ಡಿ.ಡಿ. ಯನ್ನು MD KREDL ರವರ ಹೆಸರಿಗೆ payable at Bengaluru ಎಂದು ಪಡೆಯಬೇಕು.
  •     ಅರ್ಜಿದಾರರ ಬ್ಯಾಂಕ್ ಖಾತೆಯ ವಿವರ: ಅರ್ಜಿದಾರರ ಹೆಸರು, ಬ್ಯಾಂಕ್ ಹೆಸರು , ಬ್ಯಾಂಕ್ ಶಾಖೆ ಹೆಸರು, ಖಾತೆಯ ಸಂಖ್ಯೆ, ಖಾತೆಯ ಮಾದರಿ, ಆಯ್.ಎಫ್.ಎಸ್.ಸಿ ಸಂಖ್ಯೆ (IFSC Code)
  •     ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರು ಜಾತಿ ಪ್ರಮಾಣ ಪತ್ರ, ಆರ್.ಡಿ. ಸಂಖ್ಯೆಯನ್ನು ನೀಡಬೇಕಾಗುತ್ತದೆ.
  •     ರೇಷನ್ ಕಾರ್ಡ್ ಸಂಖ್ಯೆ, ಎ.ಪಿ.ಎಲ್ / ಬಿ.ಪಿ.ಎಲ್ ಸಂಖ್ಯೆ
  •     ವಿಶೇಷ ಚೇತನರಾಗಿದ್ದಲ್ಲಿ, ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ (Unique Disability ID) ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳು ನೀಡಿದ ಅಂಗವೈಕಲ್ಯ ಪ್ರಮಾಣಪತ್ರ ನೀಡಬೇಕಾಗುತ್ತದೆ

ಆನ್ಲೈನ್ ಅರ್ಜಿ ಸಲ್ಲಿಸಲು ಈ ಮುಂದಿನ ಲಿಂಕ್ ಅನ್ನು ಕ್ಲಿಕ್ ಮಾಡಿ – https://kredlinfo.in/Applnoffgridswp_2022 -pm kusum yojana official website

    ಅರ್ಜಿಯಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ನಮೂದಿಸಿ. 

  •     ಅರ್ಜಿಯನ್ನು ತುಂಬಿದ ನಂತರ ಸ್ವೀಕೃತ ಪ್ರತಿಯನ್ನು (Acknowledgment copy) ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆಯಿರಿ.
  •     ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರವನ್ನು ನಿಗದಿತ ಸ್ಥಳದಲ್ಲಿ ಅಂಟಿಸಿ ಸಹಿ ಮಾಡಿ.
  •     ಡಿ.ಡಿ., ಆಧಾರ್ ಪ್ರತಿ, ಆರ್.ಟಿ.ಸಿ ಪ್ರತಿ, ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಎರಡು ಭಾವಚಿತ್ರ, ಜಾತಿ ಪ್ರಮಾಣ ಪತ್ರದ ಪ್ರತಿ, ರೇಷನ್ ಕಾರ್ಡ್ ಪ್ರತಿ, ಈ ಎಲ್ಲ ದಾಖಲೆಗಳ ಎರಡು ಸೆಟ್ ಸ್ವಯಂ ದೃಡೀಕರಿಸಿದ ಪ್ರತಿಗಳನ್ನು ಸಂಭಂದಿಸಿದ ವಿದ್ಯುತ್ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲನಾ ಉಪವಿಭಾಗದ ಕಛೇರಿಗೆ ಸಲ್ಲಸಿ.
  •     ಅರ್ಜಿಯಲ್ಲಿ ಸಲ್ಲಿಸಿರುವ ಮಾಹಿತಿಗಳಾದ ಡಿ.ಡಿ., ಆರ್.ಟಿ.ಸಿ, ಆಧಾರ್ ಕಾರ್ಡ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಹಾಗೂ ರೇಷನ್ ಕಾರ್ಡ್ ಪ್ರತಿ ತಾಳೆಯಾಗಬೇಕು. ಇಲ್ಲದಿದ್ದರೆ, ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
  •     ಯಾವುದೇ ಸಹಾಯಕ್ಕಾಗಿ, ಕಚೇರಿ ಸಮಯದಲ್ಲಿ ಕೆ.ಆರ್.ಇ.ಡಿ.ಎಲ್ (KREDL) ಸಂಸ್ಥೆಯನ್ನು 8095132100 ಮೂಲಕ ಸಂಪರ್ಕಿಸಬಹುದು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ