ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್

ಸರ್ಕಾರಿ ಸೇವಾ ಕೇಂದ್ರ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯಲು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವಿದೆ senior citizen card

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯಲು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಿ.ಎಸ್‌.ಸಿ. ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 

60 ವರ್ಷ ತುಂಬಿದ ಹಿರಿಯ ನಾಗರಿಕರು ಸರಕಾರ ಕೊಡುವ ಹಿರಿಯ ನಾಗರಿಕ ಗುರುತಿನ ಚೀಟಿಯನ್ನು ಪಡೆಯಬಹುದು. ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ ವಿಶೇಧಿಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮೂಲಕ ಈ ಚೀಟಿ ವಿತರಿಸಲಾಗುತ್ತದೆ. ಪಾಲಕರ, ಪೋಷಕರ ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯಿದೆಯಡಿ ಸರಕಾರದ ವಿವಿಧ ಯೋಜನೆಗಳನ್ನು ಪಡೆಯಲು ಹಿರಿಯರ ಗುರುತಿನ ಚೀಟಿ ಹೊಂದಿರುವುದು ಅವಶ್ಯಕವಾಗಿದೆ.
ಹಿರಿಯ ನಾಗರಿಕರು ಅಪರಿಚಿತ ಸ್ಥಳದಲ್ಲಿ ಅಪಘಾತಕ್ಕೊಳಗಾದರೆ ಅಥವಾ ಇನ್ನಿತರ ತುರ್ತು ಸಂದರ್ಭಗಳಲ್ಲಿಈ ಚೀಟಿ ನೆರವಾಗುತ್ತದೆ. ಗುರುತು ಚೀಟಿಯಲ್ಲಿ ತುರ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ, ರಕ್ತದ ಮಾದರಿ ಮೊದಲಾದ ಮಾಹಿತಿ ಇರುವುದರಿಂದ ತುರ್ತು ಸಂದರ್ಭದಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಲು ಅಥವಾ ತುರ್ತು ಚಿಕಿತ್ಸೆಗೆ ನೆರವಾಗುತ್ತದೆ. ಸರಕಾರಿ ಬಸ್‌, ರೈಲು, ಇಂಡಿಯನ್‌ ಏರ್‌ಲೆನ್ಸ್‌, ಏರ್‌ ಇಂಡಿಯಾ ಹಾಗೂ ಸಹರಾ ಏರ್‌ಲೆನ್ಸ್‌ ಎಕನಾಮಿಕ್‌ ವರ್ಗದಲ್ಲಿ ರಿಯಾಯಿತಿ ಪಡೆಯಲು ಸಹಕಾರಿಯಾಗುತ್ತದೆ. ಹೆತ್ತವರ ಮತ್ತು ಹಿರಿಯ ನಾಗರಿಕರ ಕಾಯಿದೆಯಡಿ ಪಡೆಯಬಹುದಾದ ಸವಲತ್ತುಗಳು, ಕೇಂದ್ರ ಹಾಗೂ ರಾಜ್ಯ ಸರಕಾರ ಹಿರಿಯ ನಾಗರಿಕರಿಗೆ ಕೊಡ ಮಾಡುವ ಸೌಲಭ್ಯಗಳನ್ನು ಪಡೆಯಲು ಈ ಗುರುತಿನ ಚೀಟಿ ಬಳಕೆಯಾಗುತ್ತದೆ.
ಆಸಕ್ತರು ತಮ್ಮ ಆಧಾರ್‌(ಮೊಬೈಲ್‌ ಲಿಂಕ್‌ ಮಾಡಿರಬೇಕು) ಹುಟ್ಟಿದ ದಿನಾಂಕ, ಮನೆ ದೂರವಾಣಿ ಸಂಖ್ಯೆ, ತುರ್ತು ಸಂದರ್ಭ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ, ರಕ್ತದ ಗುಂಪು ಮೊದಲಾದ ವಿವರಗಳು, 2 ಭಾವಚಿತ್ರ ತಂದು ನಮ್ಮಲ್ಲಿ ಗುರುತು ಚೀಟಿಗಾಗಿ ಅರ್ಜಿ ಸಲ್ಲಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ